'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲೆರಡು ವಾರ ರಿಯಾಝ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಸ್ವಂತ ಅಣ್ಣ-ತಮ್ಮಂದಿರಂತೆ ಇದ್ದರು. ಇಡೀ ಮನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಿದ್ದಾಗ, ದಿವಾಕರ್ ಪರ ದನಿ ಎತ್ತಿದವರು ರಿಯಾಝ್. ಆದ್ರೆ, ಅದೇ ರಿಯಾಝ್ ಹಾಗೂ ದಿವಾಕರ್ ಮಧ್ಯೆ ಭಿನ್ನಾಭಿಪ್ರಾಯ ಶುರು ಆಯ್ತು
ರಿಯಾಝ್ ರಿಂದ ದೂರ ಸರಿದ ದಿವಾಕರ್, ಚಂದನ್ ಶೆಟ್ಟಿಗೆ ಅತ್ಯಾಪ್ತರಾದರು. ಇತ್ತ ಚಂದನ್ ಶೆಟ್ಟಿಗೂ ರಿಯಾಝ್ ಮೇಲೆ ಬೇಸರ ಶುರು ಆಯ್ತು. ಆದ್ರೆ, ಚಂದನ್ ಶೆಟ್ಟಿ ಹಾಗೂ ರಿಯಾಝ್ ಮಧ್ಯೆ ವೈಮನಸ್ಯ ಶುರು ಆಗಲು ಕಾರಣ ಏನು ಎಂಬುದು ಮಾತ್ರ ಬಹಿರಂಗ ಆಗಿರಲಿಲ್ಲ.
ಈಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಿರುವುದರಿಂದ, ಮನೆಯ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಕೂಡ ಶಮನ ಆಗಬೇಕು ಎಂಬ ಕಾರಣದಿಂದ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ದಿನ ಮೂವರನ್ನ ಒಟ್ಟುಗೂಡಿಸಲು ಮುಂದಾದರು.
By forgetting the past, Chandan Shetty, Riyaz Basha and Diwakar patch up during Bigg Boss Kannada 5 Grand Finale.